ಸೋಮವಾರ, ಡಿಸೆಂಬರ್ 26, 2022

5.ಕರ್ಪೂರಾರತಿ ಬೆಳಗಿರೆ

ಕರ್ಪೂರಾರತಿ ಬೆಳಗಿರೆ ಕರುಣಾದಿ ಮೌನ ದೇವಗೆ

ತನ್ನ ಅಂಗವ ಕಡೆಸಿದ ಉಲ್ಲಾಸ ಮಹಾತ್ಮವ ತೋರಿದ  ।। ।।

ನನ್ನೇ ಜೀತ ಪೀರ ನೆಂದು ನೆನೆಸಿ ಪಾಶವ ಕರಗಿದ

ಕಲ್ಲು ದೇವರಿಗುಣಸಿ ಉಣಿಸಿದ ಎಲ್ಲ ದೇವರ ಗುರು ಮೌನ ।। ।।

ಸಲ್ಲ ಕರೆದನು ವೆಂಕಟೇಶ ಕಲ್ಲು ದೇವರು ತಿರುಗಿದ

ಧರಿಯೊಳಾಧಿಕ ತಳದ ಕಲ್ಯಾಣ ಪುರದ ವಿಶ್ವಭ್ರಹ್ಮಗೆ ।। ।।

ಮನದಿ ಬೆರೆದು ಮಹಿಮೆ ತೋರಿದ ವಿಶ್ವಭ್ರಹ್ಮ ವೀತನೆ ಶ್ರೀ ವಿಶ್ವಭ್ರಹ್ಮ ವೀತನೆ

ಧರಿಯೊಳಾಧಿಕ ತಳದ ತಿಂಥಿಣಿ ಪುರದ ವಿಶ್ವಭ್ರಹ್ಮಗೆ ।। ।।

ಕರ್ಪೂರಾರತಿ ಬೆಳಗಿರೆ ಕರುಣಾದಿ ಮೌನ ದೇವಗೆ

4.ಕರುಣಾದಿ ಕಾಯಮ್ಮ

ಕರುಣಾದಿ ಕಾಯಮ್ಮ ಕಾಳಮ್ಮ ತಾಯೆ ಕಾಳಮ್ಮ ತಾಯೆ

ಆದಿಶಕ್ತಿ ಜಗ ದಂಬ ಮನವಾಯೆ ಕರುಣಾದೆ ದೇವಿ ಕರುಣಾದೆ ।। ।।

ಶುಂಭ ನಿಶುಂಭರ ಜಯ ಚರಣ ವರೆಸಿ ಜಯ ಚರಣ ವರೆಸಿ

ಸೋಳ ಸಜ್ಜನರಿಗೆ ಶಿಕ್ಷವ ಕೊಡಸಿ ಕರುಣಾದೆ ದೇವಿ ಕರುಣಾದೆ ।। ।।

ತ್ರಿಶೂಲ ತ್ರಿನೇತ್ರ ಕರಗ ತಂದೀರ ಕರಗ ತಂದೀರ

ಏಕಾಂತ ಬೆಳಗುವೆ ಕಾಯಿ ಕರ್ಪೂರ ಕರುಣಾದೆ ದೇವಿ ಕರುಣಾದೆ ।। ।।

ಎರಡು ಹಸ್ತದಲ್ಲಿ ಬಾಪೂಜಿಕಾರ ಬಾಪೂಜಿಕಾರ

ಕಡೆದು ಬಡೆದಾಡಿರೆ ಧೈತ್ಯರ ಸಂಹಾರ ಕರುಣಾದೆ ದೇವಿ ಕರುಣಾದೆ ।। ।।

ವರುಷಕ್ಕೆ ಬರುವುದು ನೇಮದು ಗಾದೆ ನೇಮದು ಗಾದೆ

ಭಕ್ತರು ತರುತಾರೆ ಉಡಿಯಕ್ಕಿ ಗೋದಿ ಕರುಣಾದೆ ದೇವಿ ಕರುಣಾದೆ ।। ।।

ದೇವಿ ಇರುವ ಸ್ಥಳ ಶಿರಸಂಗಿ ಗ್ರಾಮ ಶಿರಸಂಗಿ ಗ್ರಾಮ

ನಂಬಿದ ಭಕ್ತರಿಗೆ ಪಾದ ತೋರಮ್ಮ ಕರುಣಾದೆ ದೇವಿ ಕರುಣಾದೆ ।। ।।

3.ಜಯದೇವಿ ಜಯದೇವಿ ಜಯ ಮಹಾಂಕಾಳಿ

ಜಯದೇವಿ ಜಯದೇವಿ ಜಯ ಮಹಾಂಕಾಳಿ

ಜಯದೇವಿ ಜಯದೇವಿ ಜಯ ಮಹಾಂಕಾಳಿ

ದಯಮಾಡೆ ಮಾದೇವಿ ಧೈತ್ಯರ ಸಂಹಾರಿ ।। ಜಯದೇವಿ ।।

ಕರಿವೈ ರೆವನೇರಿ ವರದಿಂದೆ ಬಂದು

ದುರುಳ ಮಹಿಷಾಸುರನ ಬುದ್ದಿ ನೀ ಕಂಡೆ ।। ಜಯದೇವಿ ।।

ಹರಿ ಹರ ಬ್ರಹ್ಮನ ಕರುಣೇಲಿ ಕರೆದೆ

ವರ ಪಟ್ಟವ ಕಟ್ಟಿ ಶಿರವಾಗಿರಲಿ ।। ಜಯದೇವಿ ।।

ಶಂಕರಿ ರೂಪವು ವರದಿಂದೆ ತಾಳಿ

ಶಂಕರಿ ಗಿಟ್ಟಂತ ಹೋಮದ ಗಾಳಿ ।। ಜಯದೇವಿ ।।

ಬಿಂಕಾದಿ ರಕ್ಷಣವ ಮಾರ್ಬಲವ ಸೀಳಿ

ಪಂಪು ಮಾಡಿಬಿಟ್ಟಿ ರಕ್ತ ಚೆಲ್ಲಾಡಿ ।। ಜಯದೇವಿ ।।

ಧರಿಯೊಳು ಧಿಕವಾದ ಶಿರಸಂಗಿ ಗ್ರಾಮ

ಪರಮಾದ ಭಕ್ತರಿಗೆ ವರವ ಕೊಡುವೆ ।। ಜಯದೇವಿ ।।

ಹರುಷದಿ ಮೌನನ ಕರುಣೇಲಿ ಕರೆದೆ

ವರಪೂಜವ ಕಟ್ಟಿ ಶಿರವಾಗಿರಲಿ ।। ಜಯದೇವಿ ।।

2.ಆರುತಿ ಬೆಳಗುವೆನೋ ಮೌನಯ್ಯಗೊಂದು

ಆರುತಿ ಬೆಳಗುವೆನೋ ಮೌನಯ್ಯಗೊಂದು ಆರುತಿ ಬೆಳಗುವೆನೋ ।।

ಆರುತಿ ಬೆಳಗುವೆ ಸೂರ್ಯ ಪ್ರಕಾಶಗೆ ।

ವಾರಿಜ ಲೋಚನ ಧೀರ ಗಂಭೀರಗೊಂದು ।। ಆರುತಿ ೧ ।।

ತನುವಿನ ತವಕವು, ಮನವಿನ ಭಕ್ತಿಯು ।

ಜ್ಞಾನದ ಕರ್ಪೂರ ಹಚ್ಚಿ ಗಂಭೀರಗೊಂದು ।। ಆರುತಿ ೨ ।।

ಶಿಕ್ಷದ ನಡೆಯಿದು, ಮೋಕ್ಷದ ಗಾಯವು ।

ಸಾಕ್ಷತ ಸಂಪನ ಪಾದ ಕಮಲಗೊಂದು ।। ಆರುತಿ ೩ ।।

ತಿಂಥಿಣಿ ವಾಸಗೆ, ಸಂತ ಶಿವ ಕಾಶಿಗೆ ।

ಸಂತತಿ ಸಂಪತಿ ಸಲವ ಮೌನಯ್ಯಗೊಂದು ।। ಆರುತಿ ೪ ।।

1.ಆರುತಿ ಬೆಳಗುವೆ ಮೌನೇಶ

ಆರುತಿ ಬೆಳಗುವೆ ಮೌನೇಶ 
ಜಯ ಜಯ ಮಂಗಳಾದಿ ಪುರುಷ ।। 
ನೀನೆ ವೇಷ, ನೀನೆ ಜಗದೀಶ, ನೀನೆ ಅಭಿಲಾಷ । 
ಜಯ ಜಯ ಮಂಗಳಾದಿ ಪುರುಷ ।। ೧ ।। 
ನೀನೆ ಕಾಂತ, ನೀನೆ ಅನಂತ, ನೀನೆ ಗುರುನಾಥ । 
ಜಯ ಜಯ ಮಂಗಳಾದಿ ಪುರುಷ ।। ೨ ।। 
ಪಂಚಾನೈನ, ನೀನೆ ತ್ರಿನಯನ, ನೀನೆ ತಿಂಥಿಣಿ ಮೌನ । 
ಜಯ ಜಯ ಮಂಗಳಾದಿ ಪುರುಷ ।। ೩ ।।