ಸೋಮವಾರ, ಡಿಸೆಂಬರ್ 30, 2013

ಒಂದೇ ಬಾರಿ ನನ್ನ ನೋಡಿ, ಸಾಹಿತ್ಯ


ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ (೨)
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ.. ಹಿಂದ ನೋಡದ (೨) (ಒಂದೇ ಬಾರಿ)

ಗಾಳಿ ಹೆಜ್ಜೆ ಹಿಡಿದ ಸುಗಂದ ಅತ್ತ ಅತ್ತ ಹೋಗು ಅಂದ (೨)
ಹೋತ ಮನಸ್ಸು ಅವನ ಹಿಂದ ನೋಡದ (೨)
ಹಿಂದ ನೋಡದ ಗೆಳತಿ.. ಹಿಂದ ನೋಡದ (ಒಂದೇ ಬಾರಿ)

ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ (೨)
ಒಂದೆ ಅಳತಿ ನಡದದ ಚಿತ್ತ ಹಿಂದ ನೋಡದ (೨)
ಗೆಳತಿ ಹಿಂದ ನೋಡದ.. ಹಿಂದ ನೋಡದ ಗೆಳತಿ ಹಿಂದ ನೋಡದ (ಒಂದೇ ಬಾರಿ)

ಸೂಜಿ ಹಿಂದ ದಾರದಾಂಗ ಕೊಳದೊಳಗ ಜಾರಿದಾಂಗ (೨)
ಹೋತ ಹಿಂದ ಬಾರದಾಂಗ ಹಿಂದ ನೋಡದ (೨)
ಹಿಂದ ನೋಡದ ಗೆಳತಿ.. ಹಿಂದ ನೋಡದ

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ (೨)
ಮುಂದ ಮುಂದ ಮುಂದ ಹೋದ ಹಿಂದ ನೋಡದ (೨)
ಗೆಳತಿ ಹಿಂದ ನೋಡದ..
ಹಿಂದ ನೋಡದ ಗೆಳತಿ.. ಹಿಂದ ನೋಡದ (೩)
                                                           --ದ.ರಾ.ಬೇಂದ್ರೆ
                                                            

ಗುರುವಾರ, ಡಿಸೆಂಬರ್ 19, 2013

ಕವನ : ಮಂಕಾಯಿತು ಮೋಡ ...

ಭುವಿಗೆ ತಲುಪುವ ಬಯಕೆಗೆ
ಹನಿಗಳನು ಒಗ್ಗೂಡಿಸಿ ಕರಿಮೊಡವಾಗಲು
ನೆಲತಾಕುವ ಘಳಿಗೆಗೆ ಉರಿಬಿಸಿಲು ಶುರುವಾಗಲು
ಬೇಸರದಿ ಚದುರಲು ಮಂಕಾಯಿತು ಮೋಡ ... ಮಂಕಾಯಿತು ಮೋಡ ...
                                                                                                ನಿಮ್ ಗೆಳೆಯ,
                                                                                                       ವೆಂಕಟೇಶ
                                                                                                            ನಗ್ ನಗ್ತಾ ಇರಿ...