ಸೋಮವಾರ, ಡಿಸೆಂಬರ್ 30, 2013

ಒಂದೇ ಬಾರಿ ನನ್ನ ನೋಡಿ, ಸಾಹಿತ್ಯ


ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ (೨)
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ.. ಹಿಂದ ನೋಡದ (೨) (ಒಂದೇ ಬಾರಿ)

ಗಾಳಿ ಹೆಜ್ಜೆ ಹಿಡಿದ ಸುಗಂದ ಅತ್ತ ಅತ್ತ ಹೋಗು ಅಂದ (೨)
ಹೋತ ಮನಸ್ಸು ಅವನ ಹಿಂದ ನೋಡದ (೨)
ಹಿಂದ ನೋಡದ ಗೆಳತಿ.. ಹಿಂದ ನೋಡದ (ಒಂದೇ ಬಾರಿ)

ನಂದ ನನಗ ಎಚ್ಚರಿಲ್ಲ ಮಂದಿ ಗೊಡವಿ ಏನ ನನಗ (೨)
ಒಂದೆ ಅಳತಿ ನಡದದ ಚಿತ್ತ ಹಿಂದ ನೋಡದ (೨)
ಗೆಳತಿ ಹಿಂದ ನೋಡದ.. ಹಿಂದ ನೋಡದ ಗೆಳತಿ ಹಿಂದ ನೋಡದ (ಒಂದೇ ಬಾರಿ)

ಸೂಜಿ ಹಿಂದ ದಾರದಾಂಗ ಕೊಳದೊಳಗ ಜಾರಿದಾಂಗ (೨)
ಹೋತ ಹಿಂದ ಬಾರದಾಂಗ ಹಿಂದ ನೋಡದ (೨)
ಹಿಂದ ನೋಡದ ಗೆಳತಿ.. ಹಿಂದ ನೋಡದ

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ (೨)
ಮುಂದ ಮುಂದ ಮುಂದ ಹೋದ ಹಿಂದ ನೋಡದ (೨)
ಗೆಳತಿ ಹಿಂದ ನೋಡದ..
ಹಿಂದ ನೋಡದ ಗೆಳತಿ.. ಹಿಂದ ನೋಡದ (೩)
                                                           --ದ.ರಾ.ಬೇಂದ್ರೆ
                                                            

ಗುರುವಾರ, ಡಿಸೆಂಬರ್ 19, 2013

ಕವನ : ಮಂಕಾಯಿತು ಮೋಡ ...

ಭುವಿಗೆ ತಲುಪುವ ಬಯಕೆಗೆ
ಹನಿಗಳನು ಒಗ್ಗೂಡಿಸಿ ಕರಿಮೊಡವಾಗಲು
ನೆಲತಾಕುವ ಘಳಿಗೆಗೆ ಉರಿಬಿಸಿಲು ಶುರುವಾಗಲು
ಬೇಸರದಿ ಚದುರಲು ಮಂಕಾಯಿತು ಮೋಡ ... ಮಂಕಾಯಿತು ಮೋಡ ...
                                                                                                ನಿಮ್ ಗೆಳೆಯ,
                                                                                                       ವೆಂಕಟೇಶ
                                                                                                            ನಗ್ ನಗ್ತಾ ಇರಿ...

ಭಾನುವಾರ, ನವೆಂಬರ್ 24, 2013

ಕವನ : ಎಚ್.ಸಿ.ಎಲ್. ಪಯಣ

ನೆನಪಿನಲ್ಲಿರುವುದು ಈ ದಿನ ಮರೆಯಲಾಗದು ಅನುದಿನ...
ಇಲ್ಲಿಗೆ ಬಂದು ಸೇರಿದೆವು ಗುಂಪು ಗುಂಪಾಗಿ ಆ ದಿನ...
ಜೊತೆಯಾಗಿಯೇ ಇರುವೆವು ಪ್ರತಿ ದಿನ...
ಕಾಯ್ತಿದ್ವಿ ಕಾಂಚಾಣಕ್ಕಾಗಿ ಒಂದ್ ದಿನ ಅದು ತಿಂಗಳ ಕೊನೆದಿನ...
ಪ್ರೀತಿ ಚೆಲ್ಲಿರಿ ನಿಮ್ಮ ದಾರಿಯಲಿ ಎಲ್ಲ ದಿನ...
ಕೊನೆತನಕ ಮರಿಬ್ಯಾಡ್ರಿ ಒಬ್ಬರಿಗ್ ಒಬ್ಬರನ್ನ...
ನಗು ನಗುತ ಇರಲಿ ಜೀವನ ಮುಂದೆ ಸಾಗುತಿರಲಿ ನಮ್ಮಿ ಸುಂದರ ಪಯಣ ...
ಮರೆತರು ಮರೆಯಲಾಗದು ಈ ದಿನ ನೆನಪಿನಲ್ಲಿರುವುದು ಅನುದಿನ...
                                                                                          ನಿಮ್ ವೆಂಕಟೇಶ
                                                                                                      ನಗ್ ನಗ್ತಾ ಇರಿ  

ಕವನ : ಕನಸಲಿ ಬಂದಾಕೆ..

ಕನಸಲಿ ಬಂದ್ಲು ನನ್ನಾಕೆ ಅಂದು
ಕೇಳಿದ್ಲು ನಿನ್ನ ಪ್ರೀತಿ ಎಷ್ಟು ಗಾಡವೆಂದು
ಕೇಳಬೇಡ ಈ ರೀತಿ ನೀ ಮಗದೊಂದು
ನಾ ನಿನ್ನವನು ಅಂದು ಇಂದು ಎಂದೆಂದು
ಕನಸಿನಿಂದ ಎದ್ದು ನೋಡಲು ಅವ್ವ ಕೇಳಿದ್ಲು ಆ ಹುಡ್ಗಿ ಯಾರೆಂದು ..
                                                                                     ನಿಮ್ ವೆಂಕಟೇಶ
                                                                                                 ನಗ್ ನಗ್ತಾ ಇರಿ 

ಕವನ : ಮನದೊಡತಿ ...

ಸಪ್ತ ಲೋಕಗಳ ಒಂದುಗೂಡಿಸಿ ..
ಸಪ್ತ ಸ್ವರದಿ ಕಂಠರಿಸಿ ..
ಸಪ್ತ ವರ್ಣಗಳ ಬೆರೆಸಿ..
ಸಪ್ತ ಹೆಜ್ಜೆಗಳ ನಡೆಸಿ ..
ನನ್ನ ಬಾಳ ಅಲಂಕರಿಸಲು ಬರುತಾಳೆ .. ಒಡತಿ.. ನನ್ನ ಮನದೊಡತಿ..
                                                                                            ನಿಮ್ ವೆಂಕಟೇಶ
                                                                                                        ನಗ್ ನಗ್ತಾ ಇರಿ.. 

ಕವನ : ನಂಜ.... ನಂಜಿ....

ನೀ ಹಿಂಗ್ ನೋಡ್ ಬ್ಯಾಡ್ವೆ ನಂಜಿ
ಮಾತೆ ಬರ್ತಿಲ್ಲ ಅಂಜಿ ಅಂಜಿ,,
ನಿನಗಾಗಿ ಈ ಸಂಜಿ , ಮಾಡ್ತೀನಿ ಗಂಜಿ
ಒಮ್ಮೆ ಮುಗಳ್ನಗೆ ಬೇರೆ ನನ್ನ್ ಗುಲಗಂಜಿ ..
ಕರೆದುಕೊಂಡ್ ಹೋಗುವೆ ಪುಂಜಿ .... ಚಿರಾ  ಪುಂಜಿ....
                                                                       ನಿಮ್ ವೆಂಕಟೇಶ
                                                                                    ನಗ್ ನಗ್ತಾ ಇರಿ.. 

ಬುಧವಾರ, ನವೆಂಬರ್ 6, 2013

ಮರಳಿ ಮರೆಯಾಗಿ, ಸಾಹಿತ್ಯ - ಸವಾರಿ


ಮರಳಿ ಮರೆಯಾಗಿ ತೆರಳಿ ತೆರೆಯಾಗಿ ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ 
ಮರಳಿ ಮರೆಯಾಗಿ ತರಲಿ ತಂಗಾಳಿ ಹೊಮ್ಮಿ ಹೊಸದಾದ ಹರುಷ ಹಲವು ಹಸಿ ಖುಷಿ ಕವನ 

ಕನಸ ನೀ ನನಸಾಗಿಸಿ ಕಲರವ ನೀ ಪಸರಿಸಿ ನೀ ... ಇನಿಯನೆ ಪ್ರೀತಿಗೆ ಸಾರಥಿ 
ಮರಳಿ ಮರೆಯಾಗಿ ತೆರಳಿ ತೆರೆಯಾಗಿ ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ

ರಿಂಗಣ ಹೊಸತನ ತನುವ ಈ ನರ್ತನ ತಿಂಗಳ ಬೆಳಕನಾ ಕಂಡೆ ಈ ಸಂಜೆನಾ 
ಧರೆಗಿಳಿದ ಕಿನ್ನರನೆ ವಿಸ್ಮಯದ ಕಿರಣವೆ ನೀ ನನ್ನ ಕನಸುಗಳು ತೇಲಾಡಿ ಕುಣಿಯುತಿವೆ 
ನೀ ಇನಿಯನೇ ಪ್ರೀತಿಗೆ ಸಾರಥಿ 
ಮರಳಿ ಮರೆಯಾಗಿ ತೆರಳಿ ತೆರೆಯಾಗಿ ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ

ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೆ ನಿಲ್ಲದಾ ತವಕವೆ ಭವ್ಯ ಸಂಮಿಲನಕೆ 
ಆಗಸಕೆ ರಂಗೆರಚಿ ಬಣ್ಣದಲಿ ಭಾವ ಜಿನುಗಿ ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು 
ನೀ ಇನಿಯನೇ ಪ್ರೀತಿಗೆ ಸರಾಥಿ 
ಮರಳಿ ಮರೆಯಾಗಿ ತೆರಳಿ ತೆರೆಯಾಗಿ ಮನದ ದಡಕೀಗ ಬಡಿದು ಒಲವು ಸಿಹಿ ಸವಿ ಕವನ

ಸೋಮವಾರ, ಅಕ್ಟೋಬರ್ 14, 2013

ಈ ಭೂಮಿ ಬಣ್ಣದ ಬುಗುರಿ, ಸಾಹಿತ್ಯ - ಮಹಾಕ್ಷತ್ರಿಯ




ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಓ ಓ ಓಹೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ

ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ ಹಡೆದವರೆ ದೈವ ಕಣೋ
ಸುಖವಾದ ಭಾಷೆಯ ಕಲಿಸೋ ಸರಿಯಾದ ದಾರಿಗೆ ನಡೆಸೋ ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ ಕಾಲ ಕ್ಷಣಿಕ ಕಣೋ ಓ ಓ ಓಹೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ

ಮರಿಬೇಡ ಮಗುವಿನ ನಗುವ ಕಳಿಬೇಡ ನಗುವಿನ ಸುಖವ ಭರವಸೆಯೇ ಮಗುವು ಕಣೋ
ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ ಜೀವನವೇ ಪ್ರೀತಿ ಕಣೋ

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಓ ಓ ಓಹೋ
ಈ ಭೂಮಿ ಬಣ್ಣದ ಬುಗುರಿ ಆ ಶಿವನೆ ಚಾಟಿ ಕಣೋ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ

ಶನಿವಾರ, ಅಕ್ಟೋಬರ್ 5, 2013

ಕವನ : ಗಂಡ ಹೆಂಡ್ತಿ


ಮುನ್ಸ್ಕೋ ಬೇಡವೆ ನನ್ನ ಹೆಂಡ್ತಿ 
ಈ ದಸರಗೊಂದ್ ಸೀರೆ ಗ್ಯಾರಂಟಿ 
ಲೇ ತುಂಟಿ ನೀನ್ ಆಗಿದ್ಯ ತುಂಬಾ ಘಾಟಿ 
ಮತ್ತೆ...  ಮತ್ತೆ .... ಮೊನ್ನೆ ಹಲ್  ಬಿರಿತಿದ್ದೆ ನೋಡಿ ಪಕ್ಕದ್ಮನೆ ಆಂಟಿ 
ಲೇ ಲೇ ನಿಂಗ್ ಯಾಕ್ ಬಂತೆ ಈ ಬ್ರಾಂತಿ 
ನೀ ಹಿಂಗೆ ಮಾಡಿದ್ರೆ ... ನೀ ಹಿಂಗೆ ಮಾಡಿದ್ರೆ ಆಂಟಿ ಕೈಲೊಂದ್ ಮಗು ಗ್ಯಾರಂಟಿ 
ಆಂಟಿ ಕೈಲಿ ನಿನ್ನ್ ಮಗು ಗ್ಯಾರಂಟಿ . . . 
                                                                        ನಿಮ್ ವೆಂಕಟೇಶ
                                                                                    ನಗ್ ನಗ್ತಾ ಇರಿ.. 

ಮಂಗಳವಾರ, ಅಕ್ಟೋಬರ್ 1, 2013

ಕನ್ನಡವೆ ನಮ್ಮಮ್ಮ , ಸಾಹಿತ್ಯ - ಮೋಜುಗಾರ ಸೊಗಸುಗಾರ


ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ

ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು

ಬರೆಯೋರ ತವರೂರು ನಡೆಯೋರ ಹಿರಿಯೂರು
ನಟಿಸೋರ ನವಿಲೂರು ನುಡಿಸೋರ ಮೈಸೂರು
ಕೂಡಿದರೆ ಕಾಣುವುದು ಎದೆ ತುಂಬಾ ಹಾರಾಗುವುದು
ಮಧುರ ಮಧುರ ಇದು ಅಮರ ಅಮರ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು

ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ
ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು
ಸರಳ ಸರಳ ಇದು ವಿರಳ ವಿರಳ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು

ಅಭಿಮಾನ ಹಾಲಂತೆ .. ಹಾಲಂತೆ ರವಿಮಾನ ವಿಷವಂತೆ
ಸಹಿಸೋರು ನಾವಂತೆ ನಿರಭಿಮಾನ ಬೇಡಂತೆ
ಕನ್ನಡತಿ ಆಜ್ಞೆಇದು  ಅವಲೆದಯಾ ಹಾಡು ಇದು
ಅವಳ ಬಯಕೆ ಇದು ನಮಗೆ ಹರಕೆ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು

ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು
ಸಿದ್ದವೋ ಸತ್ತವೋ  ಕನ್ನಡಕ್ಕೆ ಬಾಳಲು

ಕರುನಾಡ ತಾಯಿ ಸದಾ ಚಿನ್ಮಯಿ, ಸಾಹಿತ್ಯ - ನಾನು ನನ್ನ ಹೆಂಡ್ತಿ


ಲಾಲಾಲ ಲಾಲ ಲಾಲಾ ಲಾಲಲ 
ಕರುನಾಡ ತಾಯಿ ಸದಾ ಚಿನ್ಮಯಿ ,ಕರುಣದ ತಾಯಿ ಸದಾ ಚಿನ್ಮಯಿ 
ಈ ಪುಣ್ಯ ಭೂಮಿ ನಮ್ಮ ದೇವಾಲಯ, ಪ್ರೇಮಾಲಯ ಈ ದೇವಾಲಯ 
।। ಕರುನಾಡ ತಾಯಿ ॥

ವೀರ ಧೀರರಾಳಿದ ನಾಡು ನಿನ್ನದು, ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರ ನೆಲೆ ನಿನ್ನದು, ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು ॥ ಕರುನಾಡ ತಾಯಿ ॥ 

ಜೀವತಂತಿ ಮೀಟುವ ಸ್ನೇಹ ನಮ್ಮದು, ಎಲ್ಲ ಒಂದೇ ಎನ್ನುವ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ ನುಡಿ ನಮ್ಮದು, ಮಾದುರ್ಯ ತುಂಬಿದ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು 
ರೋಮ ರೋಮಗಳು ನಿಂತವು ತಾಯೇ ಚೆಲುವ ಕನ್ನದದೊಳೆನಿದು ಮಾಯೆ
ಮುಗಿಲೆ ಕಡಲೆ ಸಿಡಿಲೆ ಕೇಳಿರಿ, ಮುಗಿಲೆ ಕಡಲೆ ಸಿಡಿಲೆ ಕೇಳಿರಿ 
ತನುವು ಮನವು ಧನವು ಎಲ್ಲ ಕನ್ನಡ, ತನುವ ಮನವು ಧನವು ಎಲ್ಲ ಕನ್ನಡ ॥ ಕರುನಾಡ ತಾಯಿ ॥ 

ನಿಮ್ ಕಡಿ ಸಾಂಬಾರ್ ಅಂದ್ರೆ, ಸಾಹಿತ್ಯ - ಸಾಮ್ರಾಟ್ ಕನ್ನಡ ಚಲನಚಿತ್ರ

ನಿಮ್ ಕಡಿ ಸಾಂಬಾರ್ ಅಂದ್ರೆ ನಮ್ ಕಡಿ ತಿಳಿಯೋದಿಲ್ಲ
ನಮ್ ಕಡಿ ಡಾಂಬರ್ ಅಂದ್ರೆ ನಿಮ್ ಕಡಿ ತಿಳಿಯೋದಿಲ್ಲ 

ನಿಮ್ ಕಡಿ  ಶಿರಾ ಅಂದ್ರೆ ತಲೆ ಅಂತ ತಿಳ್ಕೊತಿರಿ 
ನಮ್ ಕಡಿ ಶಿರಾ ಅಂದ್ರೆ ಕೇಸರಿಬಾತ್ ಅನ್ಕೊತಿವಿ 
ಎಂತದು ಎಂತದು ಹಾಡೋದೆಂತ ಕೂಡೋದೆಂತ ಕುಣಿಯೋದೆಂತ 
ಹ್ಯಾಂಗಪ್ಪ ಹ್ಯಾಂಗಪ್ಪ ಹಾಡೋದ್ಯಾಂಗ ಕೂಡೋದ್ಯಾಂಗ ಕುಣಿಯೋದ್ಯಾಂಗ 

ಬೆಳಗಾವಿಯಾದರೇನು ಬೆಂಗಳೂರು ಆದರೇನು 
ನಗಬೇಕು ನಾವು ಮೊದಲು ಮಾತಾಡಲು 
ಎದೆ ಭಾಷೆಯ ಅರಿವಾಗಲು ... 

ಹುಬ್ಬಳ್ಳಿಯಾದರೇನು ಭದ್ರಾವತಿಯಾದರೇನು 
ಬೆರಿಬೇಕು ನಾವು ಮೊದಲು ನಲಿದಾಡಲು 
ನಾವೆಲ್ಲರೂ ಸರಿ ಹೋಗಲು ... 

ಬೆಂಗಳೂರಲ್ಲಿ ಬೋಂಡ ಅಂದ್ರೆ ಆಲೂಗಡ್ಡೆ ಉಂಡೆಯಂತೆ 
ಮಂಗಳೂರಲ್ಲಿ ಬೋಂಡ ಅಂದ್ರೆ ಎಳನೀರ ಕಾಯಂತೆ 

ಗದಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ 
ಮೈಸೂರಿನಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ 
ಮೈಸೂರಲಿ ಹೊಲಗದ್ದೆಗೆ  ಭೂತಾಯಿ ಅಂತಾರೆ
ಮಂಗಳೂರಲಿ ಒಂದು ಮೀನಿಗೆ ಭೂತಾಯಿ ಅಂತಾರೆ 
ನಿಮ್ ಕಡಿ ಹಂಗಿ ಅಂದ್ರೆ ಹೊಗೆಸೊಪ್ಪು ಹಚ್ಚುವುದು ಸೇದುವುದು 
ನಮ್ ಕಡಿ ಹಂಗಿ ಅಂದ್ರ ಚೊಕ್ಕ ಮಾಡೋ ಮಾನವರ ನಾಮವದು 

ಸಾವಿರ ಹೂವು ಎದೆಹನಿ ಬೇಕು ಜೇನಿನ ಗೂಡಾಗಲು 
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು ... 

ಹುಳಿಗೆರಿ ಆದರೇನು ಮಡಿಕೇರಿಯಾದರೇನು 
ದುಡಿಬೇಕು ನಾವು ಮೊದಲು ದಣಿಯಾಗಲು 
ಬಂಗಾರದ ಗಣಿಯಾಗಲು ... 

ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು 
ಯಾವ ಭಾಷೆ ಕಲಿಯೋದು ಯಾವುದ್ ಬಿಡೋದು 
ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು 
ನೂರಾರರು ಗುರಿಯಿಲ್ಲದ ನೂರಾರು ಕವಲುಗಳು 
ನೋಟಿನಲ್ಲಿ ಕಾಣುವುದು ಹದಿನಾಲ್ಕು ರಾಜ್ಯಗಳ ಲಿಪಿಗಳು 
ಕನ್ನಡಕ್ಕೆ ಅಲ್ಲಿಹುದು ನಾಲ್ಕನೆಯ ದೊಡ್ಡ ಸ್ಥಾನಮಾನಗಳು 
ಕನ್ನಡ ನಾಡ ಜನ್ಮದ ಹಿಂದೆ ತ್ಯಾಗಗಳ ಕಥೆಯಿದೆ 
ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿಯ ಜೊತೆಯಿದೆ .... 


ಲಲಾಲ ಲಾಲಾಲಾಲ ಲಲಾಲ ಲಾಲಲಾಲ ಲಲಾಲ ಲಾಲಲಾಲ ಲಲಾಲಲಾ ಲಾಲಲಾಲ ಲಾಲಲಲ || ೨ ॥

ಮಂಗಳವಾರ, ಸೆಪ್ಟೆಂಬರ್ 24, 2013

ಕವನ : ಪುಟ್ಟ ಹೃದಯ


ನನ್ನ ಎದೆಯ ಗೂಡಿನೊಳಗೆ ನಿನಗಾಗಿ ಪುಟ್ಟ ಹೃದಯ 
ನೀ ಬರುವಿಕೆಯ ಹಾದಿ ಕಾಯುತಿರಲು ... 
ಕ್ಷಣಗಣನೆ ಪಾಲಿಸದೆ , ಅಗಲಿಕೆಯ ಆಲಿಸಿ ,
ವೈಮನಸ್ಸಿಗೆ ಹೂಕೊಡದೆ, ಕಣ್ಣ ಬಿಂದುಗಳ ಸಮಜಾಯಿಸಿ
ಬಡಿಯುತಿದೆ ನಿನ್ನ ಹಾದಿಯ ಕಾಯುತ ... 
                                                                                                             ನಿಮ್ ವೆಂಕಟೇಶ 
                                                                                                                        ನಗ್ ನಗ್ತಾ ಇರಿ.. 

ಕವನ : ಮನುಜ ನೀ ಯಾರಿಗಾದೆ !!

                                                           
                                                       ಮನುಜ ನೀ ಯಾರಿಗಾದೆ !!

ಮನುಜ ನೀ ಯಾರಿಗಾದೆ ... ಮನುಜ ನೀ ಯಾರಿಗಾದೆ... 
ಭೂ ತಾಯಿಯ ಗರ್ಭವ ಕೊರೆದೆ ... ಸಂಪತ್ತಿನ ಆಸೆಗೆ ಬಾಂಧವ್ಯ ಬಿಡಿಸಿದೆ ... 
ಕೋಪ ನಿಷ್ಟುರ ನಿನ್ನ ಆವರಿಸಿದೆ ... ಪ್ರೀತಿಯ ಸಾಗರ ಚೆಲ್ಲದೆ ಒಡಂಬಡಿಕೆಯ ಕೈ ಹಿಡಿದೆ ... 
ಮನುಜ ನೀ ಯಾರಿಗಾದೆ ... ಮನುಜ ನೀ ಯಾರಿಗಾದೆ ... 
                                                                                                                     
ನಿಮ್ ಗೆಳೆಯ
         ವೆಂಕಟೇಶ 
                               ನಗ್ ನಗ್ತಾ ಇರಿ ...

ಭಾನುವಾರ, ಸೆಪ್ಟೆಂಬರ್ 15, 2013