ಶನಿವಾರ, ಫೆಬ್ರವರಿ 1, 2014

ಕೆಂಗಲ್ಲ ಹನುಮಂತರಾಯ ಸಾಹಿತ್ಯ



ಕೆಂಗಲ್ಲ ಹನುಮಂತರಾಯ ಓ ಕೆಂಗಲ್ಲ ಹನುಮಂತರಾಯ । ೨।

ಅರುಣೋದಯ ಕಾಂತಿಯ ಕೆಂಪಾದ ಮೊಗದಲ್ಲಿ ಕಣ್ತುಂಬ ಕಂಡು ಕಣ್ತುಂಬಿ ಬಂದು
ಕೈ ಮುಗಿದೆ ಅರಿಯದೆಯೆ ಬೆರಗಾಗಿದಿಯಾ  । ಕೆಂಗಲ್ಲ ।

ಧೈನ್ಯತೆಯೆ ತುಂಬಿದೆ ಈ ನನ್ನ ಕಣ್ಣುಗಳು ಕರುಣೆಯ ತುಂಬಿದೆ ಆ ನಿನ್ನ ಕಣ್ಣುಗಳು ।೨।
ಒಂದಾಗಿ ಬೆರೆತಾಗ ಆನಂದದ ವೇಗ ಮನ ಹಿಗ್ಗಿ ಹೂವಾಗಿ ಪಾದದಲಿ ಬಿದ್ದಾಗ  । ಕೆಂಗಲ್ಲ ।
ಧನ್ಯನಾದೆ ಎಂದು ಹೃದಯ ಕೂಗಿತು ಜೀಯ ಕೆಂಗಲ್ಲ ಹನುಮಂತರಾಯ

ಎಲ್ಲಿಗೋ ಹೋಗುವ ಆತುರ ಏಕಯ್ಯಾ ಯಾರನೋ ನೋಡುವ ಕಾತುರ ಏನಯ್ಯಾ ।೨।
ಈ ನಿನ್ನ ಮಂದಿರಕೆ ಈ ದಿವ್ಯ ಸನ್ನಿಧಿಗೆ ಆಸೆಯಿಂದ ಜನರು ಬರುತಿರಲು ದರುಶನಕೆ । ಕೆಂಗಲ್ಲ ।
ಎತ್ತ ಹೋಗುವೆ ನೀನು ಹೇಳಯ್ಯ ಮಹನೀಯ ಕೆಂಗಲ್ಲ ಹನುಮಂತರಾಯ

ನಾ ನಿನ್ನ ಮರೆತರೆ ನನ್ನ ತಾಯಾಣೆ ನೀ ಕೈಯ ಬಿಟ್ಟರೆ ಶ್ರೀ ರಾಮನಾಣೆ । ೨।
ಉಸಿರಲ್ಲಿ ಉಸಿರಾಗಿ ಮನದಲ್ಲಿ ಸ್ಥಿರವಾಗಿ ಮನೆ ಮಾಡಿ ನೀ ನೆಲೆಸಿ ಕೈ ಹಿಡಿದು ಉದ್ದರಿಸಿ । ಕೆಂಗಲ್ಲ ।
ಜನುಮ ಸಾರ್ಥಕ ಮಾಡು ಸ್ವಾಮಿ ಮಾರುತಿರಾಯ ಕೆಂಗಲ್ಲ ಹನುಮಂತರಾಯ ಓ ಕೆಂಗಲ್ಲ ಹನುಮಂತರಾಯ ಓ ಕೆಂಗಲ್ಲ ಹನುಮಂತರಾಯ