ಮಂಗಳವಾರ, ಸೆಪ್ಟೆಂಬರ್ 2, 2014

ಕವನ : " ಕಂಡೆ ಕಂಡೆ "



ಮಾಹಿತಿ ತಂತ್ರಜ್ಞಾನದ ವಿಭಿನ್ನ ಮುಖಗಳ ಕಂಡೆ,
ಕೆಲಸಕ್ಕಾಗಿ ತೊಳಲಾಡುವವರ ವೇದನೆ ಕಂಡೆ,
ತಾಳ್ಮೆಯಲಿ ಮಿತಿ ಮೀರಿಸುವ ಉದ್ಯೋಗಿಗಳ ಕಂಡೆ,
ಕಷ್ಟದ ಸನ್ನಿವೇಶಗಳ ಬಗೆಹರಿಸುವ ಗೆಳೆಯರ ಕಂಡೆ,
ನಾ ಕಂಡ... ಈ ಮುಖಗಳು ನಗು ನಗುತಿರಲಿ ಎಂಬ ಆಸೆಯ ಕಂಡೆ ...

ಕಂಡೆ ಕಂಡೆ ...

ಕೃಷಿ-ಗಿಷಿ, ಹೊಲ-ಗಿಲಗಳ ಮಾರಿ ನಗರಗಳಿಗೆ ಆಕರ್ಷಿಸಿದ ಈ ಸಮಾಜವ ಕಂಡೆ,
ಸಂಸ್ಕೃತಿಯ ತೊರೆದು ಪರಕಿಗಳ ನೆರಳಲಿ ಬಟ್ಟೆ ತೊಡುವವರ ಕಂಡೆ,
ಕೈಗಾರಿಕೆಗಳು , ತಂತ್ರಜ್ಞಾನ , ಆವಿಷ್ಕಾರಗಳು ... ನಮ್ಮನ್ನು ನುಂಗುತಿರುವುದ ಕಂಡೆ,
ಆದರೂ ಸಂಬಂದ, ಸಂಸ್ಕೃತಿ, ಭಾವೈಕ್ಯತೆ ಮೂಡಿಸಬೇಕೆಂಬ ಕನಸ ಕಂಡೆ,

ಕಂಡೆ ಕಂಡೆ ಈ ಪರಿವರ್ತನೆಗೆ ಕೈ ಜೋಡಿಸುವರು ಎಂಬ ನಂಬಿಕೆ ಒಂದೇ ... ನಂಬಿಕೆ ಒಂದೇ ...

ನಿಮ್ ಗೆಳೆಯ,
        ವೆಂಕಟೇಶ,
              ನಗ್ ನಗ್ತಾ ಇರಿ ...