ಮಂಗಳವಾರ, ಆಗಸ್ಟ್ 18, 2015

ರೀಲಿರಿಕ್ಸ್ : ತುತ್ತ ಮುತ್ತ ಗೀತೆ

ಮುತ್ಯ ಮುತ್ಯ ಮುತ್ಯ... 
ಮುತ್ಯ ಮುತ್ಯ ಮುತ್ಯ... 
ಮುತ್ತು ಕೊಟ್ಟೊಲೋ ಹೋದಾಗ ತುತ್ತು ಹಾಕೋರು ಯಾರಣ್ಣ ?
ಮಗಳು ಮನೆತನಕ ಬರೊವರೆಗು ತಿನ್ನೋದು ನೀ ಬರೀ ಗಂಜೀನ ... 
ಮಗನು ಅನ್ನೋನು ಅವ್ನಲ್ಲ ... ಹೆಂಡ್ರು ಸೆರ್ಗನ್ನೇ ಬಿಡೋದಿಲ್ಲ ... 
ಮೊಮ್ಮೊಕ್ಳು ಜತೆ ಇರಬೇಕು ಅಂದ್ಕೊಂಡಿದ್ರು ಆಗ್ತಿಲ್ಲ ... 
ಮುತ್ಯ ಮುತ್ಯ ಮುತ್ಯ... 
ಅತ್ತ ಇತ್ತ ಯೆತ್ತ... 

ನಿಮ್ ಗೆಳೆಯ,
         ವೆಂಕಟೇಶ 
                 ನಗ್ ನಗ್ತಾ ಇರಿ... 

ಕವನ: ಕಾಡುತಿರುವೆ

ಕಾಡುತಿರುವೆ ನೀನು ನನ್ನ ಹೀಗೆ ಏಕೆ 
ತಕರಾರುಗಳ ಬದಿಗಿಟ್ಟು ಒಮ್ಮೆ ಬಂದರೆ ಸಾಕೆ 
ನಿನ್ನ ಜೊತೆ ಸಪ್ತ ಪದಿ ತುಳಿಯಬೇಕೆಂಬ ಬಯಕೆ 
ಆ ದೇವರಿಗೆ ಸಲ್ಲಿಸಬೇಕೆಂದಿರುವೆ ಇದೊಂದೆ ಒಂದು ಬಯಕೆ ... 

ನಿಮ್ ಗೆಳೆಯ,
        ವೆಂಕಟೇಶ
                ನಗ್ ನಗ್ತಾ ಇರಿ...  

ಕವನ: ಅದೊಂದಿತ್ತು ಕಾಲ...

ಅದೊಂದಿತ್ತು ಕಾಲ... 
ಕೊಡುತಿದ್ದೆ ಸಾಲು ಸಾಲು ಕವನಗಳ ಸಾಲ 
ಈಗ ಲೀಲಾ ಜಾಲವಾಗಿ ಹುಡುಕಿದರೂ ಸಿಗುತ್ತಿಲ್ಲ ಅಕ್ಷರಮಾಲ 
ಈ ಪರಿಸ್ಥಿತಿಗೆ ಕಾರಣವೇನೆಂದು ತಿಳಿಯುತ್ತಿಲ್ಲ 
ಪ್ರತಿ ಸಲ ಬರೆಯುವಾಗ ನೆನಪಲ್ಲಿದ್ದವರೊಬ್ಬರು ಈಗ ಇಲ್ಲವಲ್ಲ 
ಅದೊಂದಿತ್ತು ಕಾಲ ಕೊಡುತಿದ್ದೆ ಸಾಲು ಸಾಲು ಕವನಗಳ ಸಾಲ... 

ನಿಮ್ ಗೆಳೆಯ,
        ವೆಂಕಟೇಶ 
                ನಗ್ ನಗ್ತಾ ಇರಿ ...

ಶುಕ್ರವಾರ, ಏಪ್ರಿಲ್ 24, 2015

ಕವನ : ವ್ಯತೆ ಪಟ್ಟರೇನು ಸಿಗುವುದು

ವ್ಯತೆ ಪಟ್ಟರೇನು ಸಿಗುವುದು ...
ಖುಷಿ ಪಟ್ಟರೆ ಮನ ಮಿಡಿವುದು ...
ಕೊರಗಿದರೇನು ಸಿಗುವುದು ...
ಕರಗಿದರೆ ಹೊಸ ಭಾವ ಮೂಡುವುದು ...
ದೂಷಿಸಿದರೇನು ಸಿಗುವುದು ...
ಇದ ಬಿಟ್ಟರೆ ಏಳಿಗೆ ಸಿಗುವುದು ...

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ...