ಮಂಗಳವಾರ, ಮೇ 20, 2014

ಕವನ : ಪ್ರೀತಿಸ್ದೊರ್ ಸಿಕಿದ್ರೆ

ಪ್ರೀತಿಸ್ದೊರ್ ಸಿಕಿದ್ರೆ ದುಃಖ ಕಮ್ಮಿ ಆಗುತ್ತೆ ..
ಪ್ರೀತ್ಸೋರ್ ಸಿಕಿದ್ರೆ ಪ್ರೀತಿ ಹೆಚ್ಚಾಗುತ್ತೆ ..
ಎರಡು ದಡಗಳ ಮಧ್ಯೆ ಹರಿಯೋ ನದಿ ಎಷ್ಟು ಮುಖ್ಯಾನೋ ..
ಹಾಗೆ ಎರಡು ಮನಸುಗಳ ನಡುವೆ ನಂಬಿಕೆ ಅನ್ನೋ ನದಿ ಸಹ ಅಷ್ಟೇ ಮುಖ್ಯ ..
ಪ್ರೀತಿ ಮಾಡಿ ಆದ್ರೆ ಧ್ರೋಹ ಬೇಡಿ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ... 

ಕವನ : ಕನಸ್ಗಲ್ ಇದ್ರೆ

ಕನಸ್ಗಲ್ ಇದ್ರೆ ನನಸ್ ಮಾಡ್ಕೊಳ್ಳಿ ..
ನನಸಾದ್ಮೇಲೆ ಖುಷಿಯಾಗಿರಿ ..
ಕನಸಾಗೆ ಇದ್ರೆ ಕನಸನ್ ಮರತ್ಬಿಡಿ ..
ಕನಸೋ ನನಸೋ ಎರಡಕ್ಕೂ ತೂಕ ಹಾಕ್ಬೇಡಿ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ...

ಕವನ : ಗುಂಡ್ಗೆ ಇರೋನು

ಗುಂಡ್ಗೆ ಇರೋನು ಗುಂಡುಗೆ ಹೆದ್ರಲ್ಲ..
ಕೈ ಹಿಡಿದ್ಮೇಲೆ ಕೊನೆ ತನಕ ಬಿಡಲ್ಲ ..
ಪ್ರೀತೀಲ್ ಸೋತ್ರು ದುಃಖ ಪಡಲ್ಲ
ಸಾಯೋಕ್ ಮುಂಚೆ ಈ ಮಣ್ಣಿನ್ ಋಣ ತೀರ್ಸ್ದೆ ಇರೋಲ್ಲ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ...  

ಕರುನಾಡು


         

                   ಸಂಸ್ಕೃತಿ 

         ನಮ್ಮ  ಭಾಷೆ 

                   ಕಲೆ 

                               ಎಂದೆಂದಿಗೂ ಮರೆಯದಿರಿ ... 




ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ... 

ಭಾನುವಾರ, ಮೇ 18, 2014

ನಿಲ್ಲು ನಿಲ್ಲು, ಸಾಹಿತ್ಯ - ದಿಲ್ ರಂಗೀಲಾ


ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹು ಎಂದರೆ ತುಂಬಾನೇ ಉಪಕಾರ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹು ಎಂದರೆ ತುಂಬಾನೇ ಉಪಕಾರ

ನಿನ್ನೋಳಗೇನೆ  ಬೆಳಕೊಂದು ಮನೆ ಮಾಡಿದೆ
ಮುಂಗುರುಳಲ್ಲಿ ಬೆಳಕೀಗ ಸೆರೆಯಾಗಿದೆ
ಬಡಜೀವ ಮಿಡಿವಾಗ ತಡವಿನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೇಗೆ
ನೆನಪೀನ ನಾಡಲ್ಲಿ ನಿಂದೇನೆ ಸರಕಾರ
ನೀ ಹು ಎಂದರೆ ತುಂಬಾನೇ ಉಪಕಾರ
ನೆನಪೀನ ನಾಡಲ್ಲಿ ನಿಂದೇನೆ ಸರಕಾರ
ನೀ ಹು ಎಂದರೆ ತುಂಬಾನೇ ಉಪಕಾರ

ನನ್ನೆದೆಯಲ್ಲಿ ದಿನರಾತ್ರಿ ರಸಮಂಜರಿ
ನೀನಿರುವಂತ ಕನಸೆಲ್ಲ ನನಗೆ ಸರಿ
ತುಸು ನಿಂತ ಮೊದಲೇನೆ ಮನ ಮಾತಾಡುತ..
ಭಯವೆಲ್ಲ ಒಲವಲ್ಲಿ ಮರತೆ ಹೋಯಿತು
ನನ್ನೆಲ್ಲ ಈ ಹಾರಾಟ ನೀ ಸಿಕ್ಕೊವರೆಗೆ
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹು ಎಂದರೆ ತುಂಬಾನೆ ಉಪಕಾರ
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹು ಎಂದರೆ ತುಂಬಾನೆ ಉಪಕಾರ 

ಶನಿವಾರ, ಮೇ 17, 2014

ಚಿಕ್ಕ ವಯಸ್ಸಿನ ಚಿಕ್ಕ ಆಟಿಕೆ ...

ತುಂಬಾ ದಿನ ಆಯ್ತಲ್ಲಾ ಅಪ್ಪನೂ ಯಾವ ಆಟದ ಸಾಮಾನೂ ಕೊಡ್ಸಿಲ್ಲ ... ಸರಿ ಕೊಡ್ಸು ಅಂತ ಕೇಳ್ದ್ರೆ ಇವಾಗ್ ಬ್ಯಾಡ ಮುಂದಿನ್ ಸಲ ಕೊಡ್ಸ್ತೀನಿ ಅಂತ ಹೇಳ್ದ್ರು ... 

ಆದ್ರೆ , ಈಗ ಏನಾದ್ರು ಒಂದು ಆಟ ಆಡಬೇಕಲ್ಲ ತಲೇಗ್ ಒಂದು ಕಲ್  ಬಿತ್ತು ನೋಡು ಅದೇ ಬುಲ್ಡೋಜರ್ ಮಾಡಬಹುದಲ್ಲ ಅದನ್ನ ಮಾಡೋದೇ ಒಂದು ಆಟ. 

ಅದಕ್ಕೆ ಬೇಕಾದ್ ಎರಡ್ ಮುಚ್ಚಳ ಒಂದ್ ಕ್ಯಾಂಡಲ್ ರಬ್ಬರ್ ಬ್ಯಾಂಡ್ ತೆಂಗಿನ ಕಡ್ಡಿ , ಇದನ್ನ್ ಹುಡ್ಕೊದೆ ಒಂದ್ ಸಾಹಸ ಬಿಡಿ . 

ಅಡಿಗೆ ಮನೆ ಯಾವ್ದೋ ಒಂದು ಮೂಲೆ ನಲ್ಲಿ ಸಣ್ಣ ಮೇಣದಬತ್ತಿ ಸಿಕ್ಕಿದ್ರೆ ಅರ್ದ ಕೆಲಸ ಅದಾಗೇ ಅಂತ ಅರ್ತ ಮತ್ತೆ ರಬ್ಬರ್ ಬ್ಯಾಂಡು ಸಿಕ್ತು ಆದ್ರೆ ಮುಚ್ಚಳಕಂತು ಬೀದಿ ಬೀದಿ 

ಸುತ್ತ್ಕೊಂಡು ಕೊನೆಗೆ ಸಿಗ್ಲಿಲ್ಲ ಅಂದ್ರೆ ಅಂಗಡಿದೊನ್ ಗೆ ಅಣ್ಣ ಅಣ್ಣ ಎರಡೇ ಎರಡೇ ಪೆಪ್ಸಿದೋ ಕೋಕಾಕೋಲ ದೋ ಮುಚ್ಚಳ ಕೊಡಣ್ಣ  ಅಂತಿದ್ವಿ .. ಯಾಕಂದ್ರೆ ಆ ಕಾಲಕ್ಕೆ 

ಪೆಪ್ಸಿ ಕೋಕಾಕೋಲ ಕುಡಿಯೋದ್ ಇರ್ಲಿ ನೋಡೋದೇ ಬಹಳ ದೂರದ್ ಮಾತು ಬಿಡಿ . 

ಸರಿ ಎಲ್ಲ ರೆಡಿ ಮಾಡ್ಕೊಂಡು ಆ ಎರಡು ಮುಚ್ಚಳಕ್ಕೆ ಮದ್ಯದಲ್ಲಿ ತೂತು ಹಾಕಿ .. ಹಾಗೆ ಮೇಣದಬತ್ತಿಗೂ ತೂತ್ ಹಾಕಿ ರಬ್ಬರ್ ನ ಒಂದ್ ಕಡೆ ಇಂದ 

ಮೇಣದಬತ್ತಿ ಗೆ ನಂತರ ಮುಚ್ಚಳಕ್ಕೆ ಹಾಕಿ ಒಂದು ಕಡೆ ಚಿಕ್ಕ ಮತ್ತೊಂದ್ ಕಡೆ ಒಂದು ಮೂರ್ ಇನ್ಚಿಂದ್ ತೆಂಗಿನ ಕಡ್ಡಿ ಹಾಕದ್ರೆ ...ನಮ್ ಬುಲ್ಡೋಜರ್ ರೆಡಿ .. 

ಅದು ಆಡೋದ್ ಅಂದ್ರೆ ಒಳ್ಳೆ ಖುಷಿ ನಮಗಂತೂ ಅದರಲ್ಲಿ ದಿನ ಹೋಗೋದೇ ಗೊತ್ತಾಗ್ತಿದ್ದಿಲ್ಲ  ... 

ಹೀಗೆ ನಿಮ್ಮ ಬಾಲ್ಯದ ನೆನಪನ್ನ ನೀವು ಹಂಚ್ಕೊಳ್ಳಿ ... 

ನಿಮ್ ಗೆಳೆಯ 
         ವೆಂಕಟೇಶ 
              ನಗ್ ನಗ್ತಾ ಇರಿ ...