ಭಾನುವಾರ, ಮೇ 18, 2014

ನಿಲ್ಲು ನಿಲ್ಲು, ಸಾಹಿತ್ಯ - ದಿಲ್ ರಂಗೀಲಾ


ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹು ಎಂದರೆ ತುಂಬಾನೇ ಉಪಕಾರ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹು ಎಂದರೆ ತುಂಬಾನೇ ಉಪಕಾರ

ನಿನ್ನೋಳಗೇನೆ  ಬೆಳಕೊಂದು ಮನೆ ಮಾಡಿದೆ
ಮುಂಗುರುಳಲ್ಲಿ ಬೆಳಕೀಗ ಸೆರೆಯಾಗಿದೆ
ಬಡಜೀವ ಮಿಡಿವಾಗ ತಡವಿನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೇಗೆ
ನೆನಪೀನ ನಾಡಲ್ಲಿ ನಿಂದೇನೆ ಸರಕಾರ
ನೀ ಹು ಎಂದರೆ ತುಂಬಾನೇ ಉಪಕಾರ
ನೆನಪೀನ ನಾಡಲ್ಲಿ ನಿಂದೇನೆ ಸರಕಾರ
ನೀ ಹು ಎಂದರೆ ತುಂಬಾನೇ ಉಪಕಾರ

ನನ್ನೆದೆಯಲ್ಲಿ ದಿನರಾತ್ರಿ ರಸಮಂಜರಿ
ನೀನಿರುವಂತ ಕನಸೆಲ್ಲ ನನಗೆ ಸರಿ
ತುಸು ನಿಂತ ಮೊದಲೇನೆ ಮನ ಮಾತಾಡುತ..
ಭಯವೆಲ್ಲ ಒಲವಲ್ಲಿ ಮರತೆ ಹೋಯಿತು
ನನ್ನೆಲ್ಲ ಈ ಹಾರಾಟ ನೀ ಸಿಕ್ಕೊವರೆಗೆ
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹು ಎಂದರೆ ತುಂಬಾನೆ ಉಪಕಾರ
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹು ಎಂದರೆ ತುಂಬಾನೆ ಉಪಕಾರ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.