ಶನಿವಾರ, ಮೇ 17, 2014

ಚಿಕ್ಕ ವಯಸ್ಸಿನ ಚಿಕ್ಕ ಆಟಿಕೆ ...

ತುಂಬಾ ದಿನ ಆಯ್ತಲ್ಲಾ ಅಪ್ಪನೂ ಯಾವ ಆಟದ ಸಾಮಾನೂ ಕೊಡ್ಸಿಲ್ಲ ... ಸರಿ ಕೊಡ್ಸು ಅಂತ ಕೇಳ್ದ್ರೆ ಇವಾಗ್ ಬ್ಯಾಡ ಮುಂದಿನ್ ಸಲ ಕೊಡ್ಸ್ತೀನಿ ಅಂತ ಹೇಳ್ದ್ರು ... 

ಆದ್ರೆ , ಈಗ ಏನಾದ್ರು ಒಂದು ಆಟ ಆಡಬೇಕಲ್ಲ ತಲೇಗ್ ಒಂದು ಕಲ್  ಬಿತ್ತು ನೋಡು ಅದೇ ಬುಲ್ಡೋಜರ್ ಮಾಡಬಹುದಲ್ಲ ಅದನ್ನ ಮಾಡೋದೇ ಒಂದು ಆಟ. 

ಅದಕ್ಕೆ ಬೇಕಾದ್ ಎರಡ್ ಮುಚ್ಚಳ ಒಂದ್ ಕ್ಯಾಂಡಲ್ ರಬ್ಬರ್ ಬ್ಯಾಂಡ್ ತೆಂಗಿನ ಕಡ್ಡಿ , ಇದನ್ನ್ ಹುಡ್ಕೊದೆ ಒಂದ್ ಸಾಹಸ ಬಿಡಿ . 

ಅಡಿಗೆ ಮನೆ ಯಾವ್ದೋ ಒಂದು ಮೂಲೆ ನಲ್ಲಿ ಸಣ್ಣ ಮೇಣದಬತ್ತಿ ಸಿಕ್ಕಿದ್ರೆ ಅರ್ದ ಕೆಲಸ ಅದಾಗೇ ಅಂತ ಅರ್ತ ಮತ್ತೆ ರಬ್ಬರ್ ಬ್ಯಾಂಡು ಸಿಕ್ತು ಆದ್ರೆ ಮುಚ್ಚಳಕಂತು ಬೀದಿ ಬೀದಿ 

ಸುತ್ತ್ಕೊಂಡು ಕೊನೆಗೆ ಸಿಗ್ಲಿಲ್ಲ ಅಂದ್ರೆ ಅಂಗಡಿದೊನ್ ಗೆ ಅಣ್ಣ ಅಣ್ಣ ಎರಡೇ ಎರಡೇ ಪೆಪ್ಸಿದೋ ಕೋಕಾಕೋಲ ದೋ ಮುಚ್ಚಳ ಕೊಡಣ್ಣ  ಅಂತಿದ್ವಿ .. ಯಾಕಂದ್ರೆ ಆ ಕಾಲಕ್ಕೆ 

ಪೆಪ್ಸಿ ಕೋಕಾಕೋಲ ಕುಡಿಯೋದ್ ಇರ್ಲಿ ನೋಡೋದೇ ಬಹಳ ದೂರದ್ ಮಾತು ಬಿಡಿ . 

ಸರಿ ಎಲ್ಲ ರೆಡಿ ಮಾಡ್ಕೊಂಡು ಆ ಎರಡು ಮುಚ್ಚಳಕ್ಕೆ ಮದ್ಯದಲ್ಲಿ ತೂತು ಹಾಕಿ .. ಹಾಗೆ ಮೇಣದಬತ್ತಿಗೂ ತೂತ್ ಹಾಕಿ ರಬ್ಬರ್ ನ ಒಂದ್ ಕಡೆ ಇಂದ 

ಮೇಣದಬತ್ತಿ ಗೆ ನಂತರ ಮುಚ್ಚಳಕ್ಕೆ ಹಾಕಿ ಒಂದು ಕಡೆ ಚಿಕ್ಕ ಮತ್ತೊಂದ್ ಕಡೆ ಒಂದು ಮೂರ್ ಇನ್ಚಿಂದ್ ತೆಂಗಿನ ಕಡ್ಡಿ ಹಾಕದ್ರೆ ...ನಮ್ ಬುಲ್ಡೋಜರ್ ರೆಡಿ .. 

ಅದು ಆಡೋದ್ ಅಂದ್ರೆ ಒಳ್ಳೆ ಖುಷಿ ನಮಗಂತೂ ಅದರಲ್ಲಿ ದಿನ ಹೋಗೋದೇ ಗೊತ್ತಾಗ್ತಿದ್ದಿಲ್ಲ  ... 

ಹೀಗೆ ನಿಮ್ಮ ಬಾಲ್ಯದ ನೆನಪನ್ನ ನೀವು ಹಂಚ್ಕೊಳ್ಳಿ ... 

ನಿಮ್ ಗೆಳೆಯ 
         ವೆಂಕಟೇಶ 
              ನಗ್ ನಗ್ತಾ ಇರಿ ... 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.