ಮಂಗಳವಾರ, ಸೆಪ್ಟೆಂಬರ್ 2, 2014

ಕವನ : " ಕಂಡೆ ಕಂಡೆ "



ಮಾಹಿತಿ ತಂತ್ರಜ್ಞಾನದ ವಿಭಿನ್ನ ಮುಖಗಳ ಕಂಡೆ,
ಕೆಲಸಕ್ಕಾಗಿ ತೊಳಲಾಡುವವರ ವೇದನೆ ಕಂಡೆ,
ತಾಳ್ಮೆಯಲಿ ಮಿತಿ ಮೀರಿಸುವ ಉದ್ಯೋಗಿಗಳ ಕಂಡೆ,
ಕಷ್ಟದ ಸನ್ನಿವೇಶಗಳ ಬಗೆಹರಿಸುವ ಗೆಳೆಯರ ಕಂಡೆ,
ನಾ ಕಂಡ... ಈ ಮುಖಗಳು ನಗು ನಗುತಿರಲಿ ಎಂಬ ಆಸೆಯ ಕಂಡೆ ...

ಕಂಡೆ ಕಂಡೆ ...

ಕೃಷಿ-ಗಿಷಿ, ಹೊಲ-ಗಿಲಗಳ ಮಾರಿ ನಗರಗಳಿಗೆ ಆಕರ್ಷಿಸಿದ ಈ ಸಮಾಜವ ಕಂಡೆ,
ಸಂಸ್ಕೃತಿಯ ತೊರೆದು ಪರಕಿಗಳ ನೆರಳಲಿ ಬಟ್ಟೆ ತೊಡುವವರ ಕಂಡೆ,
ಕೈಗಾರಿಕೆಗಳು , ತಂತ್ರಜ್ಞಾನ , ಆವಿಷ್ಕಾರಗಳು ... ನಮ್ಮನ್ನು ನುಂಗುತಿರುವುದ ಕಂಡೆ,
ಆದರೂ ಸಂಬಂದ, ಸಂಸ್ಕೃತಿ, ಭಾವೈಕ್ಯತೆ ಮೂಡಿಸಬೇಕೆಂಬ ಕನಸ ಕಂಡೆ,

ಕಂಡೆ ಕಂಡೆ ಈ ಪರಿವರ್ತನೆಗೆ ಕೈ ಜೋಡಿಸುವರು ಎಂಬ ನಂಬಿಕೆ ಒಂದೇ ... ನಂಬಿಕೆ ಒಂದೇ ...

ನಿಮ್ ಗೆಳೆಯ,
        ವೆಂಕಟೇಶ,
              ನಗ್ ನಗ್ತಾ ಇರಿ ...    

ಸೋಮವಾರ, ಆಗಸ್ಟ್ 11, 2014

ನೀನಿರದೆ ತಂಗಾಳಿಯು, ಸಾಹಿತ್ಯ ಗೂಗ್ಲಿ ಚಿತ್ರದಿಂದ ...




ನೀನಿರದೆ .... ತಂಗಾಳಿಯು ಮುಂಗುರುಳನು ನೇವರಿಸಿದೆ
ನೀನಿರದೆ .... ಸದ್ದಿಲ್ಲದೇ ಹೊಂಗಿರಣವು ಆವರಿಸಿದೆ
ಬದಲಾಯಿತೀಗ ನನ್ನ ಲೋಕ ನಿನ್ನ ಗುಂಗಿಲ್ಲದೆ
ಹಗುರಾಯಿತೀಗ ಒಂಟಿ ಜೀವ ನಿನ್ನ ಹಂಗಿಲ್ಲದೆ

ಪ್ರಳಯ ಗಿಳಯ , ಒಲವು ಗಿಲವು ಎಲ್ಲಾ ಮರೆತು ಇರಬಲ್ಲೆ ನಾನೊಬ್ಬನೇ ...
ವಿರಹ ಗಿರಹ ಸರಸ ಗಿರಸ ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ ...

ಹೇ... ನನ್ನ ಏಕಾಂತವು ಸಂಪೂರ್ಣ ನನದಾಯಿತು
ಪ್ರತಿನಿತ್ಯವೂ ನನಗೀಗ ಸ್ವಾತಂತ್ರ್ಯ ದಿನವಾಯಿತು
ಕಾಡಿ ಕಂಗೆಡಿಸುವ ಬಿರುಗಾಳಿ ಮರೆಯಾಯಿತು
ನಡು ನೀರಲ್ಲೆ ನೀ ಬಿಟ್ಟು ನಾ ಈಜು ಕಲಿತಾಯಿತು
ಪಿಸು ಮಾತನು ಪೋಣಿಸಿ ತರುವ ಪರದಾಟ ಇನ್ನಿಲ್ಲ ಸಾಕು
ಬಳಿ ವಾಪಸು ಬಂದಿದೆ ಹೃದಯ ಇದಕ್ಕಿಂತ ಇನ್ನೇನು ಬೇಕು
ನೂತನ ಜೀವನ ಇಂದು ನನದಾಯಿತು ।ಪ್ರಳಯ।

ನೀ ನನ್ನ ಜೊತೆಯಲ್ಲಿ ಜಗಳಾಡಿದ ಜಾಗ
ಕಂಡಾಗ ಏನೆಲ್ಲ ಜ್ಞಾಪಕವಾಗಿದೆ
ನೀನಿಟ್ಟು ಹೋದಂತ ಮುಳ್ಳೊಂದು ಎದೆಯಲ್ಲಿ
ಹೂವಾಗಿ ಅರಳುತ್ತ ಮೋಹಕವಾಗಿದೆ
ತುಸು ದೂರ ಬಂದ ಮೇಲೆ ಹೊಸದಾಗಿ ಹೃದಯ ಬೇರೆ ಬಡಜೀವ ಮತ್ತೆ ನೀನೆ ಬೇಕೆಂದು ಹಟವ ಹಿಡಿದಿದೆ

ಪ್ರಳಯ ಗಿಳಯ, ಒಲವು ಗಿಲವು ಎಲ್ಲಾ ಮರೆತು ಇರಲಾರೆ ನಾನೊಬ್ಬನೇ ...
ವಿರಹ ಗಿರಹ, ಸರಸ ಗಿರಸ ಎಲ್ಲಾ ತೊರೆದು ಇರಲಾರೆ ನಾನೊಬ್ಬನೇ ...

ಮಂಗಳವಾರ, ಮೇ 20, 2014

ಕವನ : ಪ್ರೀತಿಸ್ದೊರ್ ಸಿಕಿದ್ರೆ

ಪ್ರೀತಿಸ್ದೊರ್ ಸಿಕಿದ್ರೆ ದುಃಖ ಕಮ್ಮಿ ಆಗುತ್ತೆ ..
ಪ್ರೀತ್ಸೋರ್ ಸಿಕಿದ್ರೆ ಪ್ರೀತಿ ಹೆಚ್ಚಾಗುತ್ತೆ ..
ಎರಡು ದಡಗಳ ಮಧ್ಯೆ ಹರಿಯೋ ನದಿ ಎಷ್ಟು ಮುಖ್ಯಾನೋ ..
ಹಾಗೆ ಎರಡು ಮನಸುಗಳ ನಡುವೆ ನಂಬಿಕೆ ಅನ್ನೋ ನದಿ ಸಹ ಅಷ್ಟೇ ಮುಖ್ಯ ..
ಪ್ರೀತಿ ಮಾಡಿ ಆದ್ರೆ ಧ್ರೋಹ ಬೇಡಿ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ... 

ಕವನ : ಕನಸ್ಗಲ್ ಇದ್ರೆ

ಕನಸ್ಗಲ್ ಇದ್ರೆ ನನಸ್ ಮಾಡ್ಕೊಳ್ಳಿ ..
ನನಸಾದ್ಮೇಲೆ ಖುಷಿಯಾಗಿರಿ ..
ಕನಸಾಗೆ ಇದ್ರೆ ಕನಸನ್ ಮರತ್ಬಿಡಿ ..
ಕನಸೋ ನನಸೋ ಎರಡಕ್ಕೂ ತೂಕ ಹಾಕ್ಬೇಡಿ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ...

ಕವನ : ಗುಂಡ್ಗೆ ಇರೋನು

ಗುಂಡ್ಗೆ ಇರೋನು ಗುಂಡುಗೆ ಹೆದ್ರಲ್ಲ..
ಕೈ ಹಿಡಿದ್ಮೇಲೆ ಕೊನೆ ತನಕ ಬಿಡಲ್ಲ ..
ಪ್ರೀತೀಲ್ ಸೋತ್ರು ದುಃಖ ಪಡಲ್ಲ
ಸಾಯೋಕ್ ಮುಂಚೆ ಈ ಮಣ್ಣಿನ್ ಋಣ ತೀರ್ಸ್ದೆ ಇರೋಲ್ಲ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ...  

ಕರುನಾಡು


         

                   ಸಂಸ್ಕೃತಿ 

         ನಮ್ಮ  ಭಾಷೆ 

                   ಕಲೆ 

                               ಎಂದೆಂದಿಗೂ ಮರೆಯದಿರಿ ... 




ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ... 

ಭಾನುವಾರ, ಮೇ 18, 2014

ನಿಲ್ಲು ನಿಲ್ಲು, ಸಾಹಿತ್ಯ - ದಿಲ್ ರಂಗೀಲಾ


ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ
ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹು ಎಂದರೆ ತುಂಬಾನೇ ಉಪಕಾರ
ಇರುವಾಗ ತೋಳಲ್ಲಿ ಚಂದ್ರನೇ ಗಡಿಯಾರ
ನೀ ಹು ಎಂದರೆ ತುಂಬಾನೇ ಉಪಕಾರ

ನಿನ್ನೋಳಗೇನೆ  ಬೆಳಕೊಂದು ಮನೆ ಮಾಡಿದೆ
ಮುಂಗುರುಳಲ್ಲಿ ಬೆಳಕೀಗ ಸೆರೆಯಾಗಿದೆ
ಬಡಜೀವ ಮಿಡಿವಾಗ ತಡವಿನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ
ನೀ ಹೋಗೋ ಹಾಗಿಲ್ಲ ಈ ಕಣ್ಣ ಮರೇಗೆ
ನೆನಪೀನ ನಾಡಲ್ಲಿ ನಿಂದೇನೆ ಸರಕಾರ
ನೀ ಹು ಎಂದರೆ ತುಂಬಾನೇ ಉಪಕಾರ
ನೆನಪೀನ ನಾಡಲ್ಲಿ ನಿಂದೇನೆ ಸರಕಾರ
ನೀ ಹು ಎಂದರೆ ತುಂಬಾನೇ ಉಪಕಾರ

ನನ್ನೆದೆಯಲ್ಲಿ ದಿನರಾತ್ರಿ ರಸಮಂಜರಿ
ನೀನಿರುವಂತ ಕನಸೆಲ್ಲ ನನಗೆ ಸರಿ
ತುಸು ನಿಂತ ಮೊದಲೇನೆ ಮನ ಮಾತಾಡುತ..
ಭಯವೆಲ್ಲ ಒಲವಲ್ಲಿ ಮರತೆ ಹೋಯಿತು
ನನ್ನೆಲ್ಲ ಈ ಹಾರಾಟ ನೀ ಸಿಕ್ಕೊವರೆಗೆ
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹು ಎಂದರೆ ತುಂಬಾನೆ ಉಪಕಾರ
ನಂಗೀಗ ಸಾಕಾಯ್ತು ಕಣ್ಣಲ್ಲೇ ವ್ಯವಹಾರ
ನೀ ಹು ಎಂದರೆ ತುಂಬಾನೆ ಉಪಕಾರ 

ಶನಿವಾರ, ಮೇ 17, 2014

ಚಿಕ್ಕ ವಯಸ್ಸಿನ ಚಿಕ್ಕ ಆಟಿಕೆ ...

ತುಂಬಾ ದಿನ ಆಯ್ತಲ್ಲಾ ಅಪ್ಪನೂ ಯಾವ ಆಟದ ಸಾಮಾನೂ ಕೊಡ್ಸಿಲ್ಲ ... ಸರಿ ಕೊಡ್ಸು ಅಂತ ಕೇಳ್ದ್ರೆ ಇವಾಗ್ ಬ್ಯಾಡ ಮುಂದಿನ್ ಸಲ ಕೊಡ್ಸ್ತೀನಿ ಅಂತ ಹೇಳ್ದ್ರು ... 

ಆದ್ರೆ , ಈಗ ಏನಾದ್ರು ಒಂದು ಆಟ ಆಡಬೇಕಲ್ಲ ತಲೇಗ್ ಒಂದು ಕಲ್  ಬಿತ್ತು ನೋಡು ಅದೇ ಬುಲ್ಡೋಜರ್ ಮಾಡಬಹುದಲ್ಲ ಅದನ್ನ ಮಾಡೋದೇ ಒಂದು ಆಟ. 

ಅದಕ್ಕೆ ಬೇಕಾದ್ ಎರಡ್ ಮುಚ್ಚಳ ಒಂದ್ ಕ್ಯಾಂಡಲ್ ರಬ್ಬರ್ ಬ್ಯಾಂಡ್ ತೆಂಗಿನ ಕಡ್ಡಿ , ಇದನ್ನ್ ಹುಡ್ಕೊದೆ ಒಂದ್ ಸಾಹಸ ಬಿಡಿ . 

ಅಡಿಗೆ ಮನೆ ಯಾವ್ದೋ ಒಂದು ಮೂಲೆ ನಲ್ಲಿ ಸಣ್ಣ ಮೇಣದಬತ್ತಿ ಸಿಕ್ಕಿದ್ರೆ ಅರ್ದ ಕೆಲಸ ಅದಾಗೇ ಅಂತ ಅರ್ತ ಮತ್ತೆ ರಬ್ಬರ್ ಬ್ಯಾಂಡು ಸಿಕ್ತು ಆದ್ರೆ ಮುಚ್ಚಳಕಂತು ಬೀದಿ ಬೀದಿ 

ಸುತ್ತ್ಕೊಂಡು ಕೊನೆಗೆ ಸಿಗ್ಲಿಲ್ಲ ಅಂದ್ರೆ ಅಂಗಡಿದೊನ್ ಗೆ ಅಣ್ಣ ಅಣ್ಣ ಎರಡೇ ಎರಡೇ ಪೆಪ್ಸಿದೋ ಕೋಕಾಕೋಲ ದೋ ಮುಚ್ಚಳ ಕೊಡಣ್ಣ  ಅಂತಿದ್ವಿ .. ಯಾಕಂದ್ರೆ ಆ ಕಾಲಕ್ಕೆ 

ಪೆಪ್ಸಿ ಕೋಕಾಕೋಲ ಕುಡಿಯೋದ್ ಇರ್ಲಿ ನೋಡೋದೇ ಬಹಳ ದೂರದ್ ಮಾತು ಬಿಡಿ . 

ಸರಿ ಎಲ್ಲ ರೆಡಿ ಮಾಡ್ಕೊಂಡು ಆ ಎರಡು ಮುಚ್ಚಳಕ್ಕೆ ಮದ್ಯದಲ್ಲಿ ತೂತು ಹಾಕಿ .. ಹಾಗೆ ಮೇಣದಬತ್ತಿಗೂ ತೂತ್ ಹಾಕಿ ರಬ್ಬರ್ ನ ಒಂದ್ ಕಡೆ ಇಂದ 

ಮೇಣದಬತ್ತಿ ಗೆ ನಂತರ ಮುಚ್ಚಳಕ್ಕೆ ಹಾಕಿ ಒಂದು ಕಡೆ ಚಿಕ್ಕ ಮತ್ತೊಂದ್ ಕಡೆ ಒಂದು ಮೂರ್ ಇನ್ಚಿಂದ್ ತೆಂಗಿನ ಕಡ್ಡಿ ಹಾಕದ್ರೆ ...ನಮ್ ಬುಲ್ಡೋಜರ್ ರೆಡಿ .. 

ಅದು ಆಡೋದ್ ಅಂದ್ರೆ ಒಳ್ಳೆ ಖುಷಿ ನಮಗಂತೂ ಅದರಲ್ಲಿ ದಿನ ಹೋಗೋದೇ ಗೊತ್ತಾಗ್ತಿದ್ದಿಲ್ಲ  ... 

ಹೀಗೆ ನಿಮ್ಮ ಬಾಲ್ಯದ ನೆನಪನ್ನ ನೀವು ಹಂಚ್ಕೊಳ್ಳಿ ... 

ನಿಮ್ ಗೆಳೆಯ 
         ವೆಂಕಟೇಶ 
              ನಗ್ ನಗ್ತಾ ಇರಿ ... 

ಶುಕ್ರವಾರ, ಮಾರ್ಚ್ 14, 2014

ನನ್ನೀ ಸಾಹಿತ್ಯ: ಕುಡುಕ


ಥರ್ಟಿ ಎಂ ಎಲ್ ಕುಡಿಯೋಕೆ ಒಂದೊಳ್ ಉಪ್ಪಿನಕಾಯ್ ನೆಕ್ಕೋಕೆ
ಹಿಂಗೆ ಒಂದೆರಡ್ ಕ್ವಾಟ್ರು ಗಂಟಲೊಳಗೆ ಇಳಿಸೋಕೆ
ಸಿಕ್ಕಿದ್ ಜಾಗದಲ್ಲಿ ಉರ್ಳಾಡ್ಕೊಂಡು ನಿದ್ದೆ ಮಾಡೋಕೆ ... ನಿದ್ದೆ ಮಾಡೋಕೆ

ಪಕ್ಕದ್ ಮನೆಯೋರ್ ಜಗಳ ಆಡ್ಕೊಂಡಿದ್ದ್ರೆ ಏನಾಯ್ತು
ಉರಲ್ಲಿರೋ ಜನಗಳ್ ನನ್ನ ಉಗಿದ್ರೆ ಏನಾಯ್ತು
ಒಂದು ಹೊತ್ತಿಗ್ ಅನ್ನ ಸಿಗದೆ ಇದ್ದರೇನು
ಅಮೃತದಂತ ಎಣ್ಣೆ ಬಾಟ್ಲಿ ಜೊತೆಗೆ ಇರ್ತಯ್ತೆ

ಕೊಡಿಯೋದಕ್ಕೆ ಜೋಬಲ್ಲ್ ತುಂಬಾ ದುಡ್ಡು ಬೇಕಯ್ತೆ
ಇನ್ನೋಬರ್ ಜೇಬಿಗ್ ಕೈ ಹಾಕ್ಬಾರ್ದು ಅಂತ ಗೊತ್ತಯ್ತೆ
ಕಣ್ಣಲ್ ನೀರು ಬರದು.. ನಗುವು ಬರದೆ ಇರದು..
ನಾಳೆ ಬದುಕಿನ್ ಚಿಂತೆ ಬಿಟ್ರೆ ಆರಾಮ್ ಇರ್ತೈತಿ ಆಂ

ಕುಡಿಯೋಕ್ ಮುಂಚೆ ಹೆಂಗಿರ್ತಿವಿ ಅನ್ನೋದ್ ಬೇಕಿಲ್ಲ
ಕುಡಿದಾದ್ ಮೇಲೆ ಏನಾಗುತ್ತೆ ಹೇಳೋಕಾಗಲ್ಲ
ಬಾಟ್ಲಿ ತಾನೆ ನಮ್ಗೆ ಚಡ್ಡಿ ದೋಸ್ತ್ ಗಳೆಲ್ಲಾ
ಸಾಯೋಗಂಟ ನಂಬಿದವರ ಕೈ ಬಿಡಾಕಿಲ್ಲ ..
                                                 
                                                           ನಿಮ್ ಗೆಳೆಯ
                                                                    ವೆಂಕಟೇಶ
                                                                         ನಗ್ ನಗ್ತಾ ಇರಿ... 

ಶನಿವಾರ, ಫೆಬ್ರವರಿ 1, 2014

ಕೆಂಗಲ್ಲ ಹನುಮಂತರಾಯ ಸಾಹಿತ್ಯ



ಕೆಂಗಲ್ಲ ಹನುಮಂತರಾಯ ಓ ಕೆಂಗಲ್ಲ ಹನುಮಂತರಾಯ । ೨।

ಅರುಣೋದಯ ಕಾಂತಿಯ ಕೆಂಪಾದ ಮೊಗದಲ್ಲಿ ಕಣ್ತುಂಬ ಕಂಡು ಕಣ್ತುಂಬಿ ಬಂದು
ಕೈ ಮುಗಿದೆ ಅರಿಯದೆಯೆ ಬೆರಗಾಗಿದಿಯಾ  । ಕೆಂಗಲ್ಲ ।

ಧೈನ್ಯತೆಯೆ ತುಂಬಿದೆ ಈ ನನ್ನ ಕಣ್ಣುಗಳು ಕರುಣೆಯ ತುಂಬಿದೆ ಆ ನಿನ್ನ ಕಣ್ಣುಗಳು ।೨।
ಒಂದಾಗಿ ಬೆರೆತಾಗ ಆನಂದದ ವೇಗ ಮನ ಹಿಗ್ಗಿ ಹೂವಾಗಿ ಪಾದದಲಿ ಬಿದ್ದಾಗ  । ಕೆಂಗಲ್ಲ ।
ಧನ್ಯನಾದೆ ಎಂದು ಹೃದಯ ಕೂಗಿತು ಜೀಯ ಕೆಂಗಲ್ಲ ಹನುಮಂತರಾಯ

ಎಲ್ಲಿಗೋ ಹೋಗುವ ಆತುರ ಏಕಯ್ಯಾ ಯಾರನೋ ನೋಡುವ ಕಾತುರ ಏನಯ್ಯಾ ।೨।
ಈ ನಿನ್ನ ಮಂದಿರಕೆ ಈ ದಿವ್ಯ ಸನ್ನಿಧಿಗೆ ಆಸೆಯಿಂದ ಜನರು ಬರುತಿರಲು ದರುಶನಕೆ । ಕೆಂಗಲ್ಲ ।
ಎತ್ತ ಹೋಗುವೆ ನೀನು ಹೇಳಯ್ಯ ಮಹನೀಯ ಕೆಂಗಲ್ಲ ಹನುಮಂತರಾಯ

ನಾ ನಿನ್ನ ಮರೆತರೆ ನನ್ನ ತಾಯಾಣೆ ನೀ ಕೈಯ ಬಿಟ್ಟರೆ ಶ್ರೀ ರಾಮನಾಣೆ । ೨।
ಉಸಿರಲ್ಲಿ ಉಸಿರಾಗಿ ಮನದಲ್ಲಿ ಸ್ಥಿರವಾಗಿ ಮನೆ ಮಾಡಿ ನೀ ನೆಲೆಸಿ ಕೈ ಹಿಡಿದು ಉದ್ದರಿಸಿ । ಕೆಂಗಲ್ಲ ।
ಜನುಮ ಸಾರ್ಥಕ ಮಾಡು ಸ್ವಾಮಿ ಮಾರುತಿರಾಯ ಕೆಂಗಲ್ಲ ಹನುಮಂತರಾಯ ಓ ಕೆಂಗಲ್ಲ ಹನುಮಂತರಾಯ ಓ ಕೆಂಗಲ್ಲ ಹನುಮಂತರಾಯ   

ಗುರುವಾರ, ಜನವರಿ 16, 2014

ಕವನ : ಕನಸುಗಳ ಸುತ್ತ

ಕನಸುಗಳ ಸುತ್ತ ಸುತ್ತುತಿರುವೆ
ಬಯಕೆಗಳ ಬಯಸುತ್ತ ಹೊರಟಿರುವೆ
ಮನಸಿನ ದುಗುಡವ ಮರೆಯುತಿರುವೆ
ನೆನಪಾಗಿ ಉಳಿದ ಆ ದಿನಗಳ ಅಳಿಸುತಿರುವೆ
ಹೊಸದಾಗಿ ಚಿಗುರುವ ಮೊಗ್ಗಿಗೆ ಹಂಬಲಿಸುತಿರುವೆ .. ಕಾಯುತಿರುವೆ

ನಿಮ್ ಗೆಳೆಯ,
       ವೆಂಕಟೇಶ
              ನಗ್ ನಗ್ತಾ ಇರಿ...