ಕರುಣಾದಿ ಕಾಯಮ್ಮ ಕಾಳಮ್ಮ ತಾಯೆ ಕಾಳಮ್ಮ ತಾಯೆ ।
ಆದಿಶಕ್ತಿ
ಜಗ ದಂಬ ಮನವಾಯೆ ಕರುಣಾದೆ
ದೇವಿ ಕರುಣಾದೆ ।। ೧ ।।
ಶುಂಭ
ನಿಶುಂಭರ ಜಯ ಚರಣ ವರೆಸಿ
ಜಯ ಚರಣ ವರೆಸಿ ।
ಸೋಳ
ಸಜ್ಜನರಿಗೆ ಶಿಕ್ಷವ ಕೊಡಸಿ ಕರುಣಾದೆ ದೇವಿ ಕರುಣಾದೆ ।।
೨ ।।
ತ್ರಿಶೂಲ
ತ್ರಿನೇತ್ರ ಕರಗ ತಂದೀರ ಕರಗ
ತಂದೀರ ।
ಏಕಾಂತ
ಬೆಳಗುವೆ ಕಾಯಿ ಕರ್ಪೂರ ಕರುಣಾದೆ
ದೇವಿ ಕರುಣಾದೆ ।। ೩ ।।
ಎರಡು
ಹಸ್ತದಲ್ಲಿ ಬಾಪೂಜಿಕಾರ ಬಾಪೂಜಿಕಾರ ।
ಕಡೆದು
ಬಡೆದಾಡಿರೆ ಧೈತ್ಯರ ಸಂಹಾರ ಕರುಣಾದೆ ದೇವಿ ಕರುಣಾದೆ ।।
೪ ।।
ವರುಷಕ್ಕೆ
ಬರುವುದು ನೇಮದು ಗಾದೆ ನೇಮದು ಗಾದೆ
।
ಭಕ್ತರು
ತರುತಾರೆ ಉಡಿಯಕ್ಕಿ ಗೋದಿ ಕರುಣಾದೆ ದೇವಿ
ಕರುಣಾದೆ ।। ೫ ।।
ದೇವಿ
ಇರುವ ಸ್ಥಳ ಶಿರಸಂಗಿ ಗ್ರಾಮ
ಶಿರಸಂಗಿ ಗ್ರಾಮ ।
ನಂಬಿದ
ಭಕ್ತರಿಗೆ ಪಾದ ತೋರಮ್ಮ ಕರುಣಾದೆ
ದೇವಿ ಕರುಣಾದೆ ।। ೬ ।।